Friday, December 18, 2009

ತರಲೆ ಫಿಮನ್

ಫಿಮನ್ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳು. ಓದುವುದು ಬಿಟ್ಟು ತರಲೆ ಮಾಡುವುದೇ ಕೆಲಸ. ಹಾಸ್ಟೆಲ್ ನಲ್ಲಿ ಮಹಡಿಯ ಮೇಲೆ ಅವನ ರೂಂ. ಮೆಟ್ಟಿಲಿನ ಪಕ್ಕದಲ್ಲಿದ್ದ ಒಂದು ರೂಮಿನ ಹುಡುಗರು ಯಾವಾಗಲೂ ಬಾಗಿಲು ಹಾಕಿಕೊಂಡು ಓದುತ್ತಲೇ ಇರುತ್ತಿದ್ದರು. ಇವನಿಗೋ ಒಂದು ದಿನ ಅವರ ಕಾಲೆಳೆಯುವ ಆಸೆ. ಒಂದು ದಿನ ಅವರಿಲ್ಲದಾಗ ರೂಮಿನ ಬಾಗಿಲೊಂದನ್ನು ಕಳಚಿ ನೆಲಮಹಡಿಯಲ್ಲಿಟ್ಟು ಬಂದು ಬಿಟ್ಟ. ಆ ಕುಡುಮಿ ಹುಡುಗರಿಗೆ ಬಾಗಿಲಿಲ್ಲದೆ ಓದುವುದು ಹೇಗೆಂಬುದೇ ಸಮಸ್ಯೆಯಾಗಿತ್ತು. ಎಷ್ಟು ಹುಡುಕಿದರೂ ಸಿಗಲಿಲ್ಲ. ಇವನಿಗೆ ಮೆಟ್ಟಿಲು ಹತ್ತಿ ಹೋಗುವಾಗ ಅರ್ಧ ಬಾಗಿಲು ತೆರೆದೇ ಓದುವ ಅವರನ್ನು ನೋಡಿ ಒಳಗೊಳಗೇ ನಗುವೋ ನಗು. ಕೊನೆಗವರು ದೊಡ್ಡ ರಂಪ ಮಾಡಿ ವಾರ್ಡನ್ ಗೆ ಹೇಳಿ ಹಾಸ್ಟೆಲ್ ನಲ್ಲಿದ್ದ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಕೇಳುತ್ತ ಬಂದರು. ಎಲ್ಲರೂ ನನಗೆ ಗೊತ್ತಿಲ್ಲ ಎಂದರು. ಫಿಮನ್ ಸರದಿ ಬಂದಾಗ "ಬಾಗಿಲನ್ನು ನಾನೆ ಕಳಚಿ ನೆಲಮಹಡಿಯಲ್ಲಿಟ್ಟು ಬಂದಿದ್ದೇನೆ " ಎಂದ. ಸೀರಿಯಸ್ ಆಗಿ ಕೇಳುತ್ತಿದ್ದರೆ ಜೋಕುಮಾಡುತ್ತೀಯಲ್ಲ ಎಂದು ಬೈದರು. ಫಿಮನ್ ಸುಮ್ಮನಾದ. ಆಮೇಲೆ ಯಾವಾಗಲೋ ಯಾರೋ ನೆಲಮಹಡಿಗೆ ಹೋದಾಗ ಬಾಗಿಲು ನೋಡಿ ರಿಪೋರ್ಟ್ ಮಾಡಿದರು. ನಿಜವಾಗಲು ಫಿಮನ್ ಇಟ್ಟಿದ್ದೆಂದು ಗೊತ್ತಾಗಿ ಮತ್ತೆ ಕರೆಸಿ ಎಷ್ಟು ಕಷ್ಟ ಕೊಟ್ಟೆಯಲ್ಲ ಇಷ್ಟು ದಿನ ಎಂದು ಬೈದರು. ಅವತ್ತೆ ಹೇಳಿದನಲ್ಲ ನಾನೆ ಕಳಚಿ ನೆಲಮಹಡಿಯಲ್ಲಿಟ್ಟು ಬಂದಿದ್ದೇನೆಂದು ಅಂದ ಫಿಮನ್.

" Surely you are joking Mr Finman" ಈ ಪುಸ್ತಕ ನೊಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ ರಿಚರ್ಡ್ ಫಿಮನ್ ನ ಆತ್ಮಕಥನ. ಸರಳ ಹಾಗು ಪ್ರಯೋಗಶೀಲ ಫಿಮನ್ ಭೌತಶಾಸ್ತ್ರದಲ್ಲಿ ಅಲ್ಲದೆ ತನ್ನ ಬದುಕಿನಲ್ಲಿ ಮಾಡಿಕೊಂಡ ಪ್ರಯೋಗಗಳ ಬಗ್ಗೆ ಹೇಳುತ್ತಾ ಹೋಗುತ್ತಾನೆ. ಸರಳ ಹಾಸ್ಯ ಕಥೆಯುದ್ದಕ್ಕೂ ನಗಿಸಿ ಓದಿಸಿಕೊಂಡು ಹೋಗುತ್ತದೆ. ಎಲ್ಲಾದರೂ ಸಿಕ್ಕರೆ ಕೊಂಡು ಓದಿ.

2 comments:

  1. ರಿಚರ್ಡ್ ಫಿಮನ್ ನ ಜೀವನ ಚರಿತ್ರೆ ಒಂದು ಸೋಜಿಗವೇ,
    ನ್ಯಾನೋ ತಂತ್ರಜ್ಞಾನದ ಬಗೆಗೆ ವಿಶ್ವದಲ್ಲೇ ಮೊದಲು ಆಸಕ್ತಿ ತಳೆದವರು ಇವರು
    ಇವರ ಆಸಕ್ತಿಯ ವಿಷಯ ಹತ್ತು ಹಲವಾರು
    ನಿಮಗೆ ಸಿಕ್ಕರೆ What Do You Care What Other People Think?
    ಎಂಬ ಪುಸ್ತಕ ಓದಿ
    ಬ್ಲಾಗ್ ಲೋಕಕ್ಕೆ ಸ್ವಾಗತ

    ReplyDelete